ಹುಬ್ಬಳ್ಳಿ : ” ಹುಬ್ಬಳ್ಳಿ ಒಳಗಾ ನಿಮಗ 24×7 ಸಾರಾಯಿ ಅಂದರಾ ಶರೆ ಸಿಗತೆತಿ ಅರೇ ಎಲ್ಲಿ ಅಂತಿರೇನು..? ಎಲ್ಲಿ ಅಂದ್ರಾ ಹುಬ್ಬಳ್ಳಿ ಮಹಾನಗರದ ಆನಂದ ನಗರದಲ್ಲಿ ದಿನದ ಇಪ್ಪತ್ನಾಲ್ಕೂ ಗಂಟೆ ಸಾರಾಯಿ ಸಿಗುವ ಅಡ್ಡ ಒಂದು ಬಹು ವರ್ಷಗಳಿಂದ ಚಾಲ್ತಿಯಲ್ಲಿದೆಯಂತೆ. ಹೌದು ವಿನಾಯಕ ಎಂಬ ವ್ಯಕ್ತಿ ಆನಂದ ನಗರದಲ್ಲಿ ಅಕ್ರಮವಾಗಿ ಸಾರಾಯಿ ಮಾರುವ ಅಡ್ಡ ಶುರುಮಾಡಿ ಬಹು ವರ್ಷಗಳೇ ಕಳೆದಿವೆ ಅಂತೆ. ಇಲ್ಲಿ ಸಮಯ ಎಷ್ಟಾದರೂ ಆಗಿರಲಿ ನಿಮಗೆ ಬೆಳಗಿನ ಜಾವ 4 ಗಂಟೆಗೆ ಸಾರಾಯಿ ಬೇಕೆಂದರೂ ಸಿಗುತ್ತದೆ. ನಗರದ ಬಾರ್ ಗಳು ತೆಗೆಯುವವರೆಗೂ ಸಾರಾಯಿಗೆ ಒಂದು ರೇಟ್ ಆದರೆ ಬಾರ್ ಗಳು ತೆರೆದ ಮೇಲೆ ಮತ್ತೊಂದು ರೇಟ ಅಂತೆ ಇವೆಲ್ಲ ವಿಚಾರಗಳು ನಮ್ಮ ಸುದ್ದಿ ವಾಹಿನಿಗೆ ಲಭಿಸಿದಾಗ ನಮ್ಮ ತಂಡ ಸಿಕ್ರೇಟ್ ಕಾರ್ಯಾಚರಣೆಗೆ ಇಳಿಯುತ್ತದೆ. ಅವಾಗಾ ಈ “ಕೊಪ್ಪಿ ಅಂಗಡಿಯ” ರಹಸ್ಯ ಸಾಕ್ಷಿ ಸಮೇತ ನಮ್ಮ ತಂಡಕ್ಕೆ ಸಿಗುತ್ತದೆ.
ಹೌದು ಮನೆಯಲ್ಲಿರುವ ಹೆಣ್ಣು ಮಕ್ಕಳು ಮನೆಯ ಕಿಟಕಿಗೆ ಎರೆಡು ತೂತುಗಳನ್ನು ಮಾಡಿ ಅಲ್ಲಿ ಸಾರಾಯಿ ಮಾರಾಟ ಮಾಡುತ್ತಾರೆ ಅದಲ್ಲದೆ ಅದೇ ಮನೆ ಪಕ್ಕದಲ್ಲಿರುವ ಇವರದ್ದೇ ಆದ ಮಹಾಲಕ್ಮ್ಮೀ ಸಾವಜಿ ಹೋಟೆಲ್ ಎಂಬ ಬೋರ್ಡ ಇರುವ ಅಂಗಡಿ ಕಾಣುತ್ತದೆ. ಆದರೆ ಅದು ಸಾವಜಿ ಖಾನಾವಳಿ ಅಲ್ಲ ಅಲ್ಲಿ 3 ರೂಪಾಯಿ ಸ್ಯ್ನಾಕ್ಸ್ ಪ್ಯಾಕೇಟ್ ಗಳು ಹಾಗೂ ಸಾರಾಯಿ ಕುಡಿಯಲು ಗ್ಲಾಸ್ ಬಿಟ್ಟರೆ ಏನು ಸಿಗುವುದಿಲ್ಲ. ರಾಜಾರೋಷವಾಗಿ ಮಿನಿ ಬಾರ್ ಅನ್ನೇ ಆನಂದ ನಗರದಲ್ಲಿ ನಡೆಸುತ್ತಿರುವಾಗ ಸಂಬಂಧಪಟ್ಟ ಅಬಕಾರಿ ಇಲಾಖೆಯವರು ಏನು ಮಾಡುತ್ತಿದ್ದಾರೋ ಏನೋ ಆ ಗುರು ಸಿದ್ಧಾರೂಢನೇ ಬಲ್ಲ.
ಈ ಅಕ್ರಮ ಸಾರಾಯಿ ಅಂಗಡಿ ಇರುವುದು ಮರ್ಯಾದಸ್ಥ ಜನಸಾಮಾನ್ಯರು ವಾಸ ಮಾಡುವ ಏರಿಯಾದಲ್ಲಿ ಈ ಅಕ್ರಮ ಸಾರಾಯಿ ಅಡ್ಡೆಯಿಂದ ಅಕ್ಕ ಪಕ್ಕದ ಮನೆಯವರಿಗೆ ಅಷ್ಟೆ ಅಲ್ಲ ಪೂರ್ತಿ ಏರಿಯಾದ ಜನರಿಗೆ ಕಿರಿಕಿರಿಯಾಗುತ್ತಿದೆ. ಅಲ್ಲಿ ಸುತ್ತಮುತ್ತ ಹೆಣ್ಣು ಮಕ್ಕಳು ವಯಸ್ಸಾದವರು ಚಿಕ್ಕ ಮಕ್ಕಳಿಗೆ ಅಡ್ಡಾಡಲು ಭಯ ಹಾಗೂ ಮುಜುಗರವಾಗುತ್ತಿದೆ. ಅಲ್ಲಿ ಬರುವ ಕುಡುಕರ ಕಾಟದಿಂದ ಜನ ಬೆಸತ್ತು ಹೋಗಿದ್ದಾರೆ.
ಇಷ್ಟೆಲ್ಲ ಆಧಾರ ಸಮೇತ ಸುದ್ದಿ ಮಾಡಿದ ಮೇಲೂ ಸಂಬಂಧಪಟ್ಟ ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಕಾಯ್ದು ನೋಡೊಣ.
ವಿಡಿಯೋ ಸಾಕ್ಷಿಗಳೊಂದಿಗೆ ಇನ್ನೂ ಎಳೆ ಎಳೆಯಾಗಿ ಇದರ ರಹಸ್ಯ ನೀಡ್ತಿವಿ ಮತ್ತೆ ಇನ್ನೂ ಇದರಲ್ಲಿ ಯಾರ ಯಾರು ಭಾಗಿಯಾಗಿದ್ದಾರೆ ಯಾರ ಪಾಲು ಎಷ್ಟೆಷ್ಟು ಎಂಬುದನ್ನು ಸಂಬಂದಪಟ್ಟ ಅಧಿಕಾರಿಗಳು ತನಿಖೆಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅಲ್ಲಿ ವಾಸಿಸುತಗತಿರುವ ಜನರಿಗೆ ನೆಮ್ಮದಿಯಿಂದ ಬದುಕಲು ಅನುವು ಮಾಡಿಕೊಡಬೇಕೆಂದು ಆಗ್ರಹಿಸುತ್ತೇವೆ.
