ಗದಗ :ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ಸುಕ್ಷೇತ್ರ ಇಟಗಿ ಗ್ರಾಮದಲ್ಲಿ 27 ನೇ ವರ್ಷದ ಸಾಮೂಹಿಕ ವಿವಾಹಗಳು ಶ್ರೀ ಭೀಮಾಂಬಿಕಾದೇವಿ ದೇವಸ್ಥಾನದ ಸಭಾ ಭವನದಲ್ಲಿ ರವಿವಾರ ದಂದು ಜರುಗಿದವು.
ರೋಣ ಮತ ಕ್ಷೇತ್ರದ ಶಾಸಕರಾದ ಜಿ.ಎಸ್.ಪಾಟೀಲ್ ಅವರು ಇಟಗಿ ಗ್ರಾಮದ ದೇವಿ ಶ್ರೀ ಭೀಮಾಂಬಿಕಾದೇವಿ ಪವಾಡವನ್ನು ನೆನಪಿಸಿ ಸಂಕಟ ಬಂದಾಗ ತಾಯಿ ಭೀಮಾಂಬಿಕಾದೇವಿ ಸ್ಮರಿಸಿದರೆ ನಮ್ಮ ಕಷ್ಟಗಳು ನಿವಾರಣೆ ಯಾಗುತ್ತದೆ.
ಜೀವನದಲ್ಲಿ ಹೊಂದಾಣಿಕೆ ಇಂದ ಜೀವನಮಾಡುವುದು ಮುಖ್ಯವಾದುದು ಯುವ ಪೀಳಿಗೆಗಳು ಸರಿಯಾದ ಜೋಡಿಗಳನ್ನು ಆಯ್ಕೆ ಮಾಡಿದಿರಿ ಜೀವನದಲ್ಲಿಯು ಸಹ ಸರಿಯಾದ ದಾರಿಯಲ್ಲಿ ನಡೆದು ನಿಮ್ಮ ಜೀವನವನ್ನು ರೂಪಿಸಿಕೊಳ್ಳಲಿ ಎಂದು ರೋಣ ಮತ ಕ್ಚೇತ್ರದ ಶಾಸಕ ಜಿ.ಎಸ್.ಪಾಟೀಲ್ ಅವರು ನವ ಜೋಡಿಗಳಿಗೆ ಜೀವನ ಸಾಗಿಸಲು ಹಿತನುಡಿಗಳನ್ನು ತಿಳಿಸುತ ಶುಭ ಆರೈಸಿದರು.
ಇದೆ ಸಂದರ್ಭದಲ್ಲಿ ಧರ್ಮ ಗುರು ಮಠದ ಅಧ್ಯಕ್ಷ ಷಣ್ಮುಖಪ್ಪಜ್ಜ ಧರ್ಮರಮಠ, ಹಾಲಕೇರಿ ಅನ್ನದಾನ ಮಹಾ ಸಂಸ್ಥಾನದ ಶ್ರೀ ಮುಪ್ಪಿನ ಬಸವಲಿಂಗಸ್ವಾಮಿ, ಗುಲಬರ್ಗ ಕನಕ ಗುರು ಪೀಠ ಸಿದ್ದರಾಮನಂದಪುರಿ ಮಹಾಸ್ವಾಮಿಗಳು, ಹೂವಿನಹಡಗಲಿಯ ಡಾ.ಹಿರಿಯ ಶಾಂತವೀರ ಮಹಾಸ್ವಾಮಿಗಳು, ಶಿವಯೋಗಮಂದಿರ ಶಾಖ ನಿಡಗುಂದಿಕೊಪ್ಪದ ಮಠದ ಶ್ರೀ ಬ್ರಹ್ಮಶ್ರೀ ವೀರಭದ್ರೇಶ್ವರ ಮಹಾಸ್ವಾಮಿಗಳು, ಮುರಡಿ ಶ್ರೀ ಹಿರೇಮಠದ ಬಸಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಕೊಪ್ಪಳ ಲೋಕಸಭಾ ಕ್ಷೇತ್ರದ ಸದಸ್ಯ ರವಿ ಹಿಟನಾಳ ಮಾಜಿ ತಾಲ್ಲೂಕ ಪಂಚಾಯತ್ ಸದಸ್ಯ ಪ್ರಭು ಮೇಟಿ ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಮತಿ ವಿಜಯಲಕ್ಷ್ಮಿ ಕೊಡಗಾನೂರ, ಉಪಾಧ್ಯಕ್ಷರಾದ ಪ್ರಶಾಂತ ಕೋಮಾರ, ಸದಸ್ಯರಾದ ಭೀಮಾಂಬಿಕಾ ಕಂಬಳಿ, ಅಕ್ಕಮಹಾದೇವಿ ಜಡದೇಲಿ, ಭೀಮವ್ವ ತಳವಾರ, ಮಂಜುಳಾ ಶಿಮಿಕೇರಿ, ದುರಗಪ್ಪ ಮಾದರ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಗ್ರಾಮದ ಸಂಘ ಸಂಸ್ಥೆಗಳು ಮತ್ತು ಯುವಕ ಯುವತಿಯರು ಭಾಗಿಯಾಗಿದ್ದರು.

