ಅಪರೂಪದ ದಾಖಲೆ ಬರೆದ ರಿಷಭ್ ಪಂತ್

ಅಪರೂಪದ ದಾಖಲೆ ಬರೆದ ರಿಷಭ್ ಪಂತ್

2ನೇ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸುವ ಮೂಲಕ ರಿಷಬ್ ಪಂತ್ ಅತ್ಯಪರೂಪದ ದಾಖಲೆ ನಿರ್ಮಿಸಿದರು. ಮೊದಲ ಇನ್ನಿಂಗ್ಸ್ ನಲ್ಲಿ ಶತಕ (134 ರನ್)ಗಳಿಸಿದ್ದ ಪಂತ್ 2ನೇ ಇನ್ನಿಂಗ್ಸ್ ನಲ್ಲೂ ಶತಕ (118 ರನ್) ಗಳಿಸಿದರು. ಆ ಮೂಲಕ ಇಂಗ್ಲೆಂಡ್ ನೆಲದಲ್ಲಿನ ಟೆಸ್ಟ್ ಪಂದ್ಯವೊಂದರ ಎರಡೂ ಇನ್ನಿಂಗ್ಸ್ ನಲ್ಲಿ ಶತಕ ಗಳಿಸಿದ ಭಾರತದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.

ಅಂತೆಯೇ ಟೆಸ್ಟ್ ಪಂದ್ಯವೊಂದರಲ್ಲಿ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಸಿಡಿಸಿದ ಭಾರತದ 7ನೇ ಆಟಗಾರ ಎಂಬ ಕೀರ್ತಿಗೂ ಪಂತ್ ಭಾಜನರಾದರು. ಇದಕ್ಕೂ ಮೊದಲು ಭಾರತದ ಪರ ವಿಜಯ್ ಹಜಾರೆ, ಸುನಿಲ್ ಗವಾಸ್ಕರ್ (3 ಬಾರಿ), ರಾಹುಲ್ ದ್ರಾವಿಡ್ (2 ಬಾರಿ), ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಸಿಡಿಸಿದ ಸಾಧನೆ ಮಾಡಿದ್ದರು. ಈ ಪಟ್ಟಿಗೆ ಇದೀಗ ಪಂತ್ ಸೇರ್ಪಡೆಯಾಗಿದ್ದಾರೆ.

Related Post

Leave a Reply

Your email address will not be published. Required fields are marked *